Mankutimmana Kagga
Latest Episodes
Mankutimmana Kagga - 482
ಗುಹೆಯಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ । ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ।। ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- । ರ್ವಹಿಸುವುದೇ ಜಾಣ್ಮೆಯಲ – ಮಂಕುತಿಮ್ಮ।। 482
Mankutimmana Kagga - 678
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ । ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ।। ಉನ್ನತಿಯನಾತ್ಮವನು ತಡೆದಿಡುವ ಪಾಶಗಳು । ಛಿನ್ನವಾದಂದೆ ಸೊಗ – ಮಂಕುತಿಮ್ಮ ।। 678
Mankutimmana Kagga - 151
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ | ಜೀವವಾಸನೆಗಳಲಿ ಪೂರ್ವಕೃತವೆನಿಸಿ || ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ | ತ್ರೈವಿಧದೊಳಿರುತಿಹುದು – ಮಂಕುತಿಮ್ಮ || 151 ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.
Mankutimmana Kagga - 505
ದೈವಕೃಪೆಯನುವುದೇಂ? ಪರಸತ್ವನವವೃಷ್ಟಿ । ಜೀವಗುಣ ಪಕ್ವಪಟ್ಟಂತದರ ವೇಗ ।। ಭಾವಚೋದನೆಗಳಲಿ ಭಾಹ್ಯಸಾಧನೆಗಳಲಿ। ತೀವಿ ದೊರೆಕೊಳುವುದದು – ಮಂಕುತಿಮ್ಮ ।। 505 ದೈವಕೃಪೆಯನುವುದೇಂ=ದೈವಕೃಪೆ+ಎನುವುದು+ಅದೇಂ, ಪಕ್ವಪಟ್ಟಂತದರ=ಪಕ್ವ+ಪಟ್ಟಂತೆ+ಅದರ, ದೊರೆಕೊಳುವುದದು=ದೊರೆ+ಕೊಳುವುದು+ಅದು ಪರಸತ್ವನವವೃಷ್ಟಿ= ಪರಮಾತ್ಮನ ನ
Mankutimmana Kagga - 561 - 560 - 559
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ । ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।। ಎಂದೆಂದುಮಶ್ವತ್ತ ಹಳೆಹೊಸದು, ತಾನದಾ । ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ || 561 ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ । ತೀವಿರ್ಪುದದು ಕೆಳಗೆ ನಮ್ಮ ಲೋಕದಲ್ಲಿ ।। ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವ
Mankutimmana Kagga - 913
ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು । ಕತ್ತಲೆಯ ಮೊಡಕು ಮೂಲೆಗಳ ಸೇರದಿರು ।। ಭಾಸ್ಕರನನುಗ್ರಹವೆ ನೂತ್ನ ಜೀವನಸತ್ವ । ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ ।। 913
Mankutimmana Kagga - 762
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ । ಮೇರುವನು ಮರೆತಂದೆ ನಾರಕಕೆ ದಾರಿ ।। ದೂರವಾದೊಡದೇನು ? ಕಾಲು ಕುಂಟಿರಲೇನು । ಊರ ನೆನಪೇ ಬಲವೋ – ಮಂಕುತಿಮ್ಮ ।। 762 ಗುರಿಯಿರಲಿ=ಗುರಿ+ಇರಲಿ, ಮರೆತಂದೆ=ಮರೆತ+ಅಂದೆ,ದೂರವಾದೊಡದೇನು=ದೂರವು+ಆದೊಡೆ+ಏನು, ಕುಂಟಿರಲೇನು=ಕುಂಟು+ಇರಲು+ಏನು ಧಾರುಣಿ=ಭೂಮಿ, ಮೇರು=(ಪರ್ವತ)
Mankutimmana Kaggaa - 629
ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ । ಆವರಿಸದಳಲ್ ಎಲ್ಲರನುಮೊಂದೆ ಸಮಯ ।। ನೋವಿಲ್ಲದವರು ನೊಂದವರನು ಸಂತಯಿಸುತಿರೆ । ಜೀವನವು ಕಡಿದಹುದೆ? – ಮಂಕುತಿಮ್ಮ ।।629
Mankutimmana Kagga - 178
ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ ಪಾಶವಾಗಲ್ಬಹುದು ನಿನಗೆ ಮೈ ಮರೆಸಿ ವಾಸನೆಗಳುರುಬಿ ಚಿತ್ತ ಜ್ವರಗಳಂ ಬಿತ್ತಿ ಮೋಸದಲಿ ಕೊಲ್ಲುವುವೋ – ಮಂಕುತಿಮ್ಮ || 178
Mankutimmana Kagga - 616
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ । ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ।। ಸತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ । ಶಕ್ತಿಯಧ್ಯಾತ್ಮಕದು – ಮಂಕುತಿಮ್ಮ।। 616 ಯುಕ್ತದಿಂದೆರಡುಮಂಚುಗಳೊಂದೆ =ಯುಕ್ತದಿಂದ+ಎರಡುಂ+ಅಂಚುಗಳು+ಒಂದೆ, ಶಕ್ತಿ+ಆಧ್ಯಾತ್ಮಕೆ+ಅದು, ಭುಕ್ತಿಪಥ = ಹೊಟ್ಟೆಪಾಡಿನ ದಾರಿ. ಮುಕ್ತಿಪಥ=ಪರಮಾರ್ಥ