Mankutimmana Kagga

Mankutimmana Kagga


Latest Episodes

Mukundamala Stotra
October 18, 2021

Mukunda mAla stotram: Gita-God-Hinduism: MukundamAla Stotram 

Mankutimmana Kagga - 84
August 03, 2021

ಅಣು ಭೂತ ಭೂಗೋಳ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ|| ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84 ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು

Mankutimmana Kagga - 361
July 22, 2021

ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ | ಆರವ್ಯುದಾರ್ತರ್ ಅತ್ಯಾರ್ತರಾಪದವ॥ ರೌರವಿಗೆ ಹಿತ ಮಹಾರೌರವಿಯ ಗೋಳುದನಿ । ನಾರಕದೊಳದುಪಾಯ – ಮಂಕುತಿಮ್ಮ ॥ 361 ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ=

Mankutimmana Kagga - 451
July 19, 2021

ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ । ಶೈಲದಚಲತೆಯಿರಲು ಝರಿಯ ವೇಗ ಸೊಗ ।। ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು । ವೈಲಕ್ಷಣದೇ ಚೆಂದ – ಮಂಕುತಿಮ್ಮ ।। 451 ವಿಸ್ತರವಿರಲು=ವಿಸ್ತರವು+ಇರಲು ಶೈಲದಚಲತೆಯಿರಲು=ಶೈಲದ ಅಚಲತೆ+ಇರಲು, ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು ನೀಲ

Mankutimmana Kagga - 156
July 18, 2021

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ | ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ || ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ | ಬಾಯ ಚಪ್ಪರಿಸುವನು – ಮಂಕುತಿಮ್ಮ || 156 ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು

Mankutimmana Kagga - 535
July 13, 2021

ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು । ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।। ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ । ಪೌರುಷದ ನದಿಯಂತು – ಮಂಕುತಿಮ್ಮ ।। 535 ।। ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏ

Mankutimmana Kagga -132-131
July 10, 2021

ರಾಮನುಚ್ವಾಸವಲೆದಿರದೆ ರಾವಣನೆಡೆಗೆ | ರಾಮನುಂ ದಶಕಂಠನೆಲರನುಸಿರಿರನೆ || ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? | ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ || 132 || ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರ

Manktuimmana Kagga - 771
July 09, 2021

ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು । ಕ್ಷೀರವದು, ಘೃತವಿದ-ದರೊಳ-ಗೆನ್ನುತೊಂದು ।। ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು । ಮೂರಿಂತು ಮತವಿವರ – ಮಂಕುತಿಮ್ಮ ।। 771

Mankutimmana Kagga - 27
July 08, 2021

ಧರೆಯ ಬದುಕೇನದರ ಗುರಿಯೇನು ಫಲವೇನು? I ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ II ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ I ನರನು ಸಾದಿಪುದೇನು ? – ಮಂಕು ತಿಮ್ಮ II 27 ಧರೆ = ಭೂಮಿ, ಬಳಸು= ಸುತ್ತು, ಪರಿಭ್ರಮಣೆ = ಸುತ್ತಾಟ, ಮೃಗ= ಪ್ರಾಣಿ, ಖಗ = ಪಕ್ಷಿ

Mankutimmana Kagga - 113
July 07, 2021

ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ | ಗುಣಿಸುವನು ಭೂತಶಕ್ತಿಗಳನದರಿಂದೇಂ || ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ವ | ವಣಗಿಹುದು ಮೂಲವದು – ಮಂಕುತಿಮ್ಮ|| 113 ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ+ ಏನು| ಗಣಿತಸಾಧ್ಯದ = ಗಣಿತ +