Nenapinokuli

Nenapinokuli


Latest Episodes

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 7. ಹುಬ್ಬಳ್ಳಿ ಒಂದು ಕಥೆ, ವ್ಯಥೆ
June 12, 2019

ಹುಬ್ಬಳ್ಳಿ ಒಂದು ಕಥೆ ವ್ಯಥೆ ಎಂಬ ಲೇಖನದಲ್ಲಿ ಶ್ರೀ. ರತ್ನಾಕರ ಕುಲಕರ್ಣಿ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಹುಬ್ಬಳ್ಳಿ ಮತ್ತು ಈಗಿನ ಬೆಳದ ಹುಬ್ಬಳ್ಳಿಗೆ ಎಷ್ಟೊಂದು ವ್ಯತ್ಯಾಸ ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಾವು ಸವಿದ ಆ ಸಂತೋಷಮಯ ಕ್ಷಣಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾ...

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 6. ನಮ್ಮ ಧಾರ್ಮಿಕ ಧಾರವಾಡ
June 05, 2019

ಧಾರವಾಡದ ಕುರಿತು ಶ್ರೀ. ವಿಜಯ ಇನಾಮದಾರ ಅವರು ಬಹಳ ಸುಂದರವಾಗಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಇಲ್ಲಿನ ಗುಡಿಗಳು, ಮಠಗಳು ಮತ್ತು ಮಂದಿರಗಳ ಸಾಕಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಬರೆದಿದ್ದರೆ ಮತ್ತು ಈ ಲೇಖನವನ್ನು ತಮ್ಮ ಧ್ವನಿಯಲ್ಲಿ ವಾಚಿಸಿದ್ದಾರೆ. ಜೂನ್ 5, 2019 ರ ಸಂಚಿಕೆ

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 5. ಮೂರು ತಲಿಮಾರು ಕಂಡ ಧಾರವಾಡ
May 29, 2019

ಈ ಲೇಖನದಲ್ಲಿ ಡಾ. ದೀಪ ಜೋಶಿ ಅವರು ಧಾರವಾಡದಲ್ಲಿ ಅವರು ಕಂಡ ಮೂರು ತಲಿಮಾರಿನ ಕುಟುಂಬದ ಬಗ್ಗೆ ಬಹಳ ಸೊಗಸಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಶ್ರೀಮತಿ. ಮಾಲತಿ ಮುದಕವಿ ಅವರು ವಾಚಿಸಿದ್ದಾರೆ. ಮೇ 29, 2019 ರ ಸಂಚಿಕೆ

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 4. ನಳ ಬಂತ.. ನಳ..
May 22, 2019

ಹುಬ್ಬಳ್ಳಿ ಧಾರಾವಾಡದೊಳಗೆ ಒಂದು ಮೂವತ್ತು ವರ್ಷದ ಹಿಂದೆ.. ನಳ ಬಂದರೆ, ಜನರಲ್ಲಿ ಬರುವ ಉತ್ಸಾಹ.. ನೀರು ತುಂಬುವ ಬಗೆ.. ನೀರು ಬಾರದೆ ಹೋದರೆ ಆಗುವ ತೊಂದರೆಗಳ ಕುರಿತು ಈ ಸಂಚಿಕೆಯಲ್ಲಿ ಬಹಳ ಸುಂದರವಾಗಿ ಹೇಳಲಾಗಿದೆ. ಈ ಲೇಖನದ ವಚನವನ್ನು ಲೇಖಕರಾದ ಶ್ರೀ. ಪ್ರಶಾಂತ ಆಡೂರ ವಾಚಿಸಿದ್ದಾರೆ. ಮೇ 22,

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 3. ಸುಭಾಸ್ ರೋಡ್
May 22, 2019

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಮೂರನೇ ಭಾಗದಲ್ಲಿ ಶ್ರೀ. ಸತ್ಯಪ್ರಿಯ ವೈದ್ಯ ಇವರು ಬರೆದಂತಹ "ಸುಭಾಸ್ ರೋಡ್" ಎಂಬ ಲೇಖನವನ್ನು ಒಳಗೊಂಡಿದೆ. ಸುಭಾಸ್ ರೋಡ್ ಧಾರವಾಡ ಶಹರದ ಹೃದಯ ಭಾಗ ಹೆಂಗ ಆಗೇದ ಅನ್ನೋ ವಿವರಣೆ ಸೊಗಸಾಗಿ ಬಿಂಬಿಸಿದ್ದಾರೆ.

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 2. ನೆನಪಿನ ಸುರಳಿ ಬಿಚಿಕೊಂಡಾವು…
May 22, 2019

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಎರಡನೇ ಭಾಗದಲ್ಲಿ ಶ್ರೀ. ಗೋಪಾಲ ವಾಜಪೇಯೀ ಇವರು ಬರೆದಂತಹ "ನೆನಪಿನ ಸುರುಳಿ ಬಿಚಿಗೊಂಡವು.." ಎಂಬ ಲೇಖನದಲ್ಲಿನ ಧಾರವಾಡ ಹುಬ್ಬಳ್ಳಿ ಭಾಷೆಯ ಸೊಗಡನ್ನ ಶ್ರೀ. ಉಮೇಶ್ ದೇಸಾಯಿ ಇವರು ತಮ್ಮ ಧ್ವನಿಯಲ್ಲಿ ವಾಚಿಸಿದ್ದಾರೆ.

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಭಾಗ 1
May 18, 2019

ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.ಮೊದಲನೇ ಭಾಗದಲ್ಲಿ ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ ಪುಸ್ತಕದ ಪರಿಚಯವನ್ನು ಶ್ರೀ. ವಿಜಯ ಇನಾಮದಾರ ಇವರು ಮಾಡಿಕೊಟ್ಟಿದ್ದಾರೆ.

...
3